Tuesday, 25 November 2014

ಕ್ಷಮಿಸುವುದೇ..??



ತನ್ನ ಮೌನದಿಂದ ನನ್ನ ಮಾತನ್ನು
ತನ್ನ ಗೈರಿನಿಂದ ನನ್ನ ಹಾಜರಿಯನ್ನು
ತನ್ನದೆಲ್ಲದರಿಂದ ನನ್ನದೆಲ್ಲವನ್ನೂ
ಸದ್ದಿಲ್ಲದೇ ಕದ್ದೊಯ್ದ ಅವ
ನನ್ನೊಬ್ಬಳನ್ನೇ ಬಿಟ್ಟು ಹೋದನೇಕೆ..??

ರೆಪ್ಪೆ ತೆರೆಯುವ ಮುನ್ನವೇ ಕಣ್ಣಿಗೆ
ಕನಸುಗಳ ಬಣ್ಣ ಹಚ್ಚಿ
ಬಯಕೆಗಳಿಗೆ ರೆಕ್ಕೆ ತೊಡಿಸಿದಾತ
ಇದೀಗ ನೆನಪುಗಳ ಗೂಡಿನೊಳಗೆ
ನನ್ನನ್ನು ಬಂಧಿ ಮಾಡಿದನೇಕೆ..??

ಸದಾ ನನಗೆ ತನ್ನ ಸಂಗಾತದ
ಆಣೆ ಪ್ರಮಾಣಗಳನಿತ್ತು ಕೊನೆಯಲ್ಲಿ
ಏಕಾಂತ ಮಾತ್ರವೊಂದನ್ನೇ ಜೊತೆಯಾಗಿಸಿ
ಹಿಂತಿರುಗಿಯೂ ನೋಡದೇ ಹೋದನೇಕೆ..??
ನನ್ನ ನೆನಪೂ ಕಾಡದೇ ಸುಮ್ಮನಿತ್ತೇ..??

ಅವ ಮರಳಿ ಬರುವನೇ ಗೆಳತಿ..??
ನನಗಾಗಿ, ನನ್ನ ಪ್ರೀತಿಗಾಗಿ
ಬಾಡಿ ಹೋದ ಸುಮದಿಂದ ತಿರುಗಿ
ಸಹಜ ಸೌರಭವು ಹೊಮ್ಮುವುದೇ..??
ಚೂರಾದ ಹೃದಯ ಅವನ ಕ್ಷಮಿಸಬಲ್ಲುದೇ..??


5 comments:

  1. ಯಾತನೆಯ ಯಾಚನೆಯ ಪದಗಳ ಆಟ ಸೊಗಸಾಗಿದೆ.
    ಮನದಾಳದಲ್ಲಿ ಉಳಿದ ಕೆಲವು ಅಣುವಿನಂತಹ ಸಂದೇಶಗಳಿಗೆ ಕ್ಷಮೆ ಉತ್ತಮ ಚಿಕಿತ್ಸೆ.
    ಪ್ರೇಮಿಯ ಗೆಳತಿಯ ಸಂಗಾತಿಯ ಮನದ ಮೂಲೆ ಮೂಲೆಯ ಆಯಕಟ್ಟಿನ ಭಾವಗಳನ್ನು ಹೊರಡಿಸಿರುವ ಪರಿ ಸೂಪರ್
    ಸಹೋದರಿ ಇಷ್ಟವಾಯಿತು

    ReplyDelete
  2. ಮನದ ಮೂಲೆಯಲಿ ಅವಿತು ಕುಳಿತಿರುವ ಅವನ ಮನ ಕ್ಷಮಿಸದೇ ಇರಬಲ್ಲದೆ???

    ReplyDelete
  3. This poem deserves more eyeballs.
    Too good.....the whole poem is too good, but these 2 lines steals the show "ತನ್ನ ಮೌನದಿಂದ ನನ್ನ ಮಾತನ್ನು
    ತನ್ನ ಗೈರಿನಿಂದ ನನ್ನ ಹಾಜರಿಯನ್ನು"...very happy to read such a beautiful poem, at the same very sad that such poems hasn't reached more ppl....plz do something abt this madam.

    ReplyDelete