Tuesday, 19 August 2014

ಡೈರಿ ಪುಟ - ೫೫


                                  "ಓಯ್, ಈ ಫೋಟೋ ಹೇಗೆ ಬಂದಿದೆ..?? ಇದನ್ನು ಫೇಸ್ ಬುಕ್ ಪ್ರೊಫೈಲ್ ಪಿಕ್ ಹಾಕಲಾ..??" ಮೊಬೈಲ್ ಅನ್ನು ನನ್ನ ಮುಖದ ಹತ್ತಿರ ಹಿಡಿದು ತನ್ನ ಫೋಟೋ ತೋರಿಸುತ್ತಾ ಕೇಳಿದಳು ರೂಮ್ ಮೇಟ್.
                                  "ಪರವಾಗಿಲ್ಲ, ಚೆನ್ನಾಗಿ ಬಂದಿದೆ. ಆದರೆ ಪ್ರೊಫೈಲ್ ಪಿಕ್ ಹಾಕುವಷ್ಟು ಚೆಂದ ಇಲ್ಲ ಕಣೇ. ಆದರೂ ಮಾರಾಯ್ತಿ, ನೀನು ಅದೆಷ್ಟು ಫೋಟೋ ತೆಗೆಸಿಕೊಳ್ತೀಯಾ..?? ಅದೂ ಅಲ್ಲದೇ ನೀನು ಕ್ಲಿಕ್ ಮಾಡುವುದು ಕೂಡ ಕೇವಲ ನಿನ್ನ ಸ್ನೇಹಿತರ ಗುಂಪಿನದೇ" ನಾನು ಪ್ರಶ್ನಿಸಿದೆ.
                                   "ಅರೇ, ಅದು ನನ್ನಿಷ್ಟ. ನಾನು ಫೋಟೋ ತೆಗೆಸಿಕೊಂಡರೆ ನಿನಗ್ಯಾಕೆ ಹೊಟ್ಟೆ ಉರಿ..?? ಸ್ನೇಹಿತರದ್ದು ಕ್ಲಿಕ್ ಮಾಡದೇ ಮತ್ತೆ ದಾರಿಯಲ್ಲಿ ಹೋಗುವವರದ್ದು ಫೋಟೋ ತೆಗೆಯಲಾ"
                                   "ಅಮ್ಮಾ ತಾಯಿ, ಫೋಟೋಗ್ರಫಿ ಕೂಡ ಒಂದು ಕಲೆ. ಕೇವಲ ಸೆಲ್ಫೀ ಕ್ಲಿಕ್ ಮಾಡುತ್ತಾ ಇಲ್ಲವೇ ಗೆಳೆಯ-ಗೆಳತಿಯರ ಫೋಟೋ ತೆಗೆಯುತ್ತಾ ಇದ್ದರೆ ಮೂಡುವುದಿಲ್ಲ ಆ ಕಲೆ. ಅಷ್ಟು ಸುಲಭವಾಗಿ ಎಲ್ಲರಿಗೂ ಸಿದ್ಧಿಸುವುದೂ ಇಲ್ಲ. ಒಬ್ಬ ಪರಿಣಿತ ಛಾಯಾಗ್ರಾಹಕನಾಗಲು ಸಾಕಷ್ಟು ಶ್ರದ್ಧೆ, ತಾಳ್ಮೆ, ಪರಿಶ್ರಮ, ಅಧ್ಯಯನ - ಎಲ್ಲವೂ ಬೇಕು. ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ದರ್ಶಕರಿಗೆ ಪ್ರತ್ಯಕ್ಷ ನೋಡುತ್ತಿರುವಂತೆ ಭಾವ ಮೂಡಿಸುವುದು ಸಣ್ಣ ಮಾತೇ..?? ಅದಕ್ಕಾಗಿ ವಿಭಿನ್ನ, ಹೊಸತನದ ವಸ್ತುಗಳನ್ನು ಸೆರೆಹಿಡಿಯಬೇಕು. ಕ್ರಿಯಾಶೀಲ, ಸೃಜನಾತ್ಮಕ ಪ್ರಯತ್ನ ಮಾಡಬೇಕು. ನೀನೇನೋ ನಂಗೆ ಫೋಟೋಗ್ರಫಿ ಇಷ್ಟಾ ಅಂತೀಯಾ. ಆದರೆ ಅದರ ಕುರಿತು ಕೊಂಚವೂ ಗಂಭೀರವಾಗಿ ಕೆಲಸ ಮಾಡಿದ್ದಿಲ್ಲ ನೋಡು. ಇನ್ನಾದರೂ ಸ್ವಲ್ಪ ಅದನ್ನು ಸೀರಿಯಸ್ ಆಗಿ ತೆಗೆದುಕೊ." ನಾನು ಆಕ್ಷೇಪಣಾ ದನಿಯಲ್ಲಿ ಹೇಳಿದೆ.
                                   "ಮಹಾರಾಣಿಯವರ ಚಿತ್ತ. ಅಪ್ಪಣೆಯಾಗಲಿ." ಅವಳು ಎರಡೂ ಕೈ ಜೋಡಿಸಿ ಬಗ್ಗಿ ವಂದಿಸುತ್ತಾ ನಾಟಕೀಯವಾಗಿ ನುಡಿದಳು.


2 comments:

  1. ಒಳ್ಳೆ ಸಲಹೆ ಕೊಟ್ರಿ ನೋಡಿ ;-). ತಮ್ಮ ಅವಿಭಾಜ್ಯ ಅಂಗವೇನೋ ಎಂಬಂತೆ ಕ್ಯಾಮರಾವನ್ನು ಯಾವಾಗಲೂ ಕತ್ತಲ್ಲಿ ನೇತಾಡಿಸಿಕೊಂಡು ತಿರುಗೋ ಜನರ ಸಂಖ್ಯೆ ಜಾಸ್ತಿಯಾಗಿದೆ, especially ಎಂಜಿನಿಯರಿಂಗ್ ಮಂದಿ. 3 idiots ಚಿತ್ರ ಬಂದ ನಂತರವೇ ಕ್ಯಾಮರಾದ ಈ ಪಾಟಿ ಅತ್ಯಾಚಾರ ಜಾಸ್ತಿಯಾಗಿರುವುದು ಸಹಜವಾಗಿ ಕಂಡುಬರುತ್ತದೆ. ಫರಾನ್ ಪಾತ್ರದ ಹವ್ಯಾಸ photography. ನಮ್ಮ ಜೀವನದಲ್ಲಿ ನಮ್ಮ ಪಾತ್ರ, ಅದರ ಸ್ಂತಿಕೆ ಏನೆಂಬುದನ್ನು ಇಂತಹ ಬಹಳಷ್ಟು ಜನ ಅರ್ಥ ಮಾಡಿಕೊಳ್ಳಬೇಕಿದೆ!

    ReplyDelete
  2. ಒಳ್ಳೆ ಸಲಹೆ ಕೊಟ್ರಿ ನೋಡಿ ;-). ತಮ್ಮ ಅವಿಭಾಜ್ಯ ಅಂಗವೇನೋ ಎಂಬಂತೆ ಕ್ಯಾಮರಾವನ್ನು ಯಾವಾಗಲೂ ಕತ್ತಲ್ಲಿ ನೇತಾಡಿಸಿಕೊಂಡು ತಿರುಗೋ ಜನರ ಸಂಖ್ಯೆ ಜಾಸ್ತಿಯಾಗಿದೆ, especially ಎಂಜಿನಿಯರಿಂಗ್ ಮಂದಿ. 3 idiots ಚಿತ್ರ ಬಂದ ನಂತರವೇ ಕ್ಯಾಮರಾದ ಈ ಪಾಟಿ ಅತ್ಯಾಚಾರ ಜಾಸ್ತಿಯಾಗಿರುವುದು ಸಹಜವಾಗಿ ಕಂಡುಬರುತ್ತದೆ. ಫರಾನ್ ಪಾತ್ರದ ಹವ್ಯಾಸ photography. ನಮ್ಮ ಜೀವನದಲ್ಲಿ ನಮ್ಮ ಪಾತ್ರ, ಅದರ ಸ್ಂತಿಕೆ ಏನೆಂಬುದನ್ನು ಇಂತಹ ಬಹಳಷ್ಟು ಜನ ಅರ್ಥ ಮಾಡಿಕೊಳ್ಳಬೇಕಿದೆ!

    ReplyDelete