Sunday, 13 July 2014

ಬೀಳದ ಕನಸುಗಳು


ಇಂದೇಕೋ ಬೀಳಲಿಲ್ಲ ನನಗೆ ಕನಸುಗಳು
ಹೀಗೇಕಾಯಿತು..?? ಮೊದಲ ಬಾರಿ ತಾನೇ
ಇನ್ನೆಲ್ಲಿ ಹಾರಿಹೋದವು ಆ ಕನಸುಗಳು..??
ಮುದ್ದೆಯಾಗಿ ನಿದ್ದೆ ಮಾಡಿದ್ದೆನಲ್ಲ ಹಾಯಾಗಿ
ಬಳಿಗೆ ಸುಳಿಯಲೇ ಇಲ್ಲವೇನೋ ಇಂದು
ಮನಸ್ಸಿನ ಮೇಲೇನಾದರೂ ಮುನಿಸಿಕೊಂಡಿಹರೇ..??

ದಿನವೂ ಎಷ್ಟೆಷ್ಟು..?? ಒಂದಲ್ಲ, ಎರಡಲ್ಲ, ಹತ್ತಾರು
ಇಂದು ಲೆಕ್ಕ ಸಿಗದೇ ಸೊನ್ನೆ ಸುತ್ತಬೇಕಾಯಿತು
ಹೇಳಕೇಳದೇ ರಜಾ ಹಾಕಿ ಹೋದವೇ..??
ಕೆಲವೊಮ್ಮೆ ದಿನದ ಹೊತ್ತಲ್ಲೂ ಹರಟೆ
ಮನಸ್ಸಿನೊಂದಿಗೆ ಕೆಲಸವಿಲ್ಲದ ಮಾತು ಕತೆ
ಈಗ ರಾತ್ರಿಯ ಸಮಯದಲ್ಲೇಕೆ ರಜಾ ಹಾಕಿದವು..??

ವಿಷಯಗಳಿರಲಿಲ್ಲವೇ ಕನಸುಗಳಿಗೆ..??
ಅದೆಷ್ಟು ಮಂದಿ ಬಂದು ಹೋಗಿದ್ದರು
ನಿಂತು ಕೂತು ಮಾತನಾಡಿ ಮಾತನಾಡಿಸಿದ್ದರು
ಅದ ನನಗೆ ಅರುಹುದನ್ನು ಮರೆತರೇಕೆ..??
ನನ್ನ ಮರೆತು ಅದ್ಯಾರ ಬಳಿ ಹೋದರು..??
ಕನಸುಗಳಿಲ್ಲದೆ ನಾನೀಗ ಒಂಟಿಯಾದೆನಲ್ಲ

ಮರಳಿ ಎಂದು ಬರುವರೋ ನನ್ನ ಬಳಿಗೆ
ಹಗಲಿಗೂ ರಾತ್ರಿಗೂ ಕನಸುಗಳೇ ಸೇತುವೆ
ಅಲ್ಲಿಯ ತನಕವೂ ಪ್ರತಿ ಕ್ಷಣವೂ ಉಪವಾಸವೇ
ಕನಸುಗಳಿಲ್ಲದೆ ಮನಸು ಅರಳಿತು ಹೇಗೆ..??
ಕನಸುಗಳಿಲ್ಲದೆ ಉಸಿರು ಹರಿದೀತು ಹೇಗೆ..??
ಇದ ತಿಳಿದೂ ಕೂಡ ಎಲ್ಲಿ ಹೋದವೋ


1 comment:

  1. ಕನಸುಗಳ ಜಂಟಿತನ ಬೇಕು ಈ ಬದುಕಿಗೆ ಎಂಬ ಆಶಯ ಹೊತ್ತ ಕವಿತೆ..ಹಗಲಿಗೂ ರಾತ್ರಿಗೂ ಕನಸುಗಳೇ ಸೇತುವೆ..ವಾಸ್ತವ ಮಾತು... (y)

    ReplyDelete