Friday, 20 June 2014

ತೆಳ್ಳೇವು



ಗರಿಗರಿಯಾದ ರುಚಿಯಾದ ತಿಂಡಿ ಇದು
ಹವ್ಯಕರ ಮನೆಯ ತೆಳ್ಳನೆಯ ತೆಳ್ಳೇವು
ಹೀಗೆ ಮಡಿಚಿ ಬಾಯಲಿಟ್ಟು ಹಾಗೆ ಜಗಿದು ನುಂಗಿದರೆ
ಚಳಿಯ ಮಳೆಯಲ್ಲೂ ಬೆಚ್ಚನೆಯ ಕಾವು

ಬಿಸಿ ಬಿಸಿ ಕಾವಲಿಯ ಮೇಲೆ ಜರಿ ಜರಿ ಹಿಟ್ಟು
ಚೊರ್‍ರ್ ಎನ್ನುತ್ತಾ ನೃತ್ಯಗೈಯ್ಯುವ ಸೊಗಸು
ತಾಳ ಹಾಕಿದಂತೆ ಕುಣಿಯುವ ಘಮ್ಮ್ ಎನ್ನುವ ಕಂಪು
ಮೂಗಿಗೆ ಬಡಿದಾಗ ಓಡುವುದು ನಿನ್ನೆಯ ಮುನಿಸು

ಹೊರಗೊಂದು ಸುತ್ತು ಒಳಗೊಂದು ಸುತ್ತು
ಹಿಟ್ಟನ್ನು ಹರವಿದಾಗ ಬಂತು ಚೆಂದದ ವೃತ್ತ
ನಿಮಿಷಗಳ ನಂತರ ಎತ್ತಿಕೊಳ್ಳುವಂತೆ ಕೈ ಚಾಚಿದರೆ
ನಿದ್ದೆಯ ಕೊಡವಿ ಏಳುವುದು ಹಸಿವಿನ ಚಿತ್ತ

ಬೆಲ್ಲ-ತುಪ್ಪದ ಜುಗಲ್ ಬಂದಿಯ ಜೊತೆ
ತೆಳ್ಳೇವಿನ ರುಚಿ ಸವಿದವನಿಗೇ ಗೊತ್ತು ಗಮ್ಮತ್ತು
ಎರಡು ಖಾಲಿಯಾಗಿ ಮೂರನೆಯದನ್ನು ಬಾಯಿಗಿಟ್ಟಾಗ
ನಾಲಿಗೆಯೂ ತನ್ನಿರುವ ಮರೆಯುವ ಹೊತ್ತು

ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೆಯ ಖಾತೆ ತೆರೆಯಲು
ಇದಕ್ಕಿಂತ ಬೇರ್‍ಯಾವ ತಿಂಡಿಯಿಲ್ಲ ಯೋಗ್ಯ
ಆದರೂ ನೆನದವರ ಮನದಲ್ಲಿ ಅನ್ನುವಂತಿಲ್ಲ
ತೆಳ್ಳೇವು ಸವಿಯಲೂ ಪಡೆದು ಬಂದಿರಬೇಕು ಭಾಗ್ಯ


8 comments:

  1. ಅದ್ಭುತ ಬರೆದ್ರಿ...ಚೊಲೊ ಇದ್ದು....:)

    ReplyDelete
  2. Nice : )
    aadare, innude beLi irekkaathanne !

    ReplyDelete
  3. Rashi cholo iddu akka.... I missing it a lot.......

    ReplyDelete
  4. Rashi cholo iddu akka.... I missing it a lot.......

    ReplyDelete
  5. baari chalooooo idde................

    ReplyDelete
  6. Sooper Lahari...Very true thing about "Tellavu" :)

    ReplyDelete
  7. Nicely written..Tellevina ruchi tindavke gottu!

    ReplyDelete
  8. ಕವನ ಓದಿ ಬಾಯಲ್ಲಿ ನೀರು ಬಂತು... ಹಾಗೆ ಗೆಳೆಯನ ಊರಿನಲ್ಲಿ ಇದನ್ನು ತಿಂದ ನೆನಪೂ ಸಹ...!!!! ಇದರ್ ಜೊತೆ ಪತ್ರೋಡೆ, ಕೆಸುವಿನ ಸೊಪ್ಪಿನ ಗೊಜ್ಜು, ಇತ್ಯಾದಿ... I relish all those sweet moments...

    ReplyDelete