Thursday, 8 May 2014

ಅರಸ


ನಿನ್ನ ಹಿಂದೆ ನಿನ್ನ ಹಿಂದೆ ಓಡಿದೆ ಮನಸು
ಇನ್ನು ಮುಂದೆ ಇನ್ನು ಮುಂದೆ ನಿನ್ನದೇ ಕನಸು
ಇದೀಗ ಜೀವದಲ್ಲಿ ರಂಗೋಲಿ ಹಾಕಿದಂತೆ
ನೀ ಬಂದು ಭಾವದಲ್ಲಿ ಜೋಕಾಲಿ ಆಡಿದಂತೆ
ಕಾಣಬಲ್ಲೆಯಾ ಮೋಹದ ಕಳೆಯಾ..??

ಯಾವುದೇ ತಯಾರಿ ಇಲ್ಲದೇ
ಹೃದಯವು ಸವಾರಿ ಹೊರಟಿದೆ
ಏಕಾಂಗಿ ಉಸಿರಲ್ಲಿಂದು ಹೊಸದೊಂದು ಬಿಸಿಯ ಸ್ಪರ್ಶ
ಎಲ್ಲೆಲ್ಲೂ ನಿನ್ನ ಹೆಸರು ಬರೆಯೋದೇ ಒಂದು ಹರ್ಷ
ಕೇಳಬಲ್ಲೆಯಾ ಪ್ರೇಮದ ದನಿಯಾ..??

ಪ್ರೀತಿಗೆ ನೀ ನನ್ನ ಚಂದಿರ
ಹೇಳದೇ ಹಾಡುವ ಕಾತುರ
ಎಂದೆಂದೂ ನನ್ನ ತುಟಿಯಲ್ಲಿ ನಗುವಿಗೆ ನೀನೇ ಅರಸ
ನೀ ಹೀಗೆ ದೂರ ಉಳಿದರೆ ನನಗದೇ ವನವಾಸ
ಕೇಳಬಲ್ಲೆಯಾ ಒಲವಿನ ಕರೆಯಾ..??


No comments:

Post a Comment