Saturday, 31 May 2014

ಹೆಣ್ಣೆಂದರೆ...


ನಾನೂ ಕೂಡ
ನಿಮಗೆ ಜನ್ಮವಿತ್ತ ತಾಯಿಯಂತೆ
ನಿಮ್ಮೊಡನೆ ಆಡಿ ಬೆಳೆದ ಅಕ್ಕತಂಗಿಯರಂತೆ
ಕೈ ತುತ್ತು ಉಣ್ಣಿಸಿ ಬೆಳೆಸುವವಳು ನಾನೇ
ಕೈ ಹಿಡಿದು ಬಾಳು ಬೆಳಗುವವಳು ನಾನೇ
ಒಡಲೊಳಗೆ ಹೊತ್ತು ಪೋಷಿಸುವವಳು
ಮಡಿಲಲ್ಲಿ ಮಲಗಿಸಿಕೊಂಡು ಸಂತೈಸುವವಳು

ನನ್ನ ಕಣ್ಣುಗಳಲ್ಲಿ
ಕುಡಿನೋಟದ ಹೊರತಾಗಿಯೂ ಭಾವ ಲೋಕವಿದೆ
ಅದುರುವ ಅಧರಗಳಲ್ಲಿ
ಜೇನಿಗಿಂತಲೂ ಸಿಹಿಯಾದ ಜೀವನಾಮೃತವಿದೆ
ಸುಂದರ ತನುವಿನಲ್ಲಿ
ಬಾಹ್ಯಕ್ಕಿಂತಲೂ ಚೆಲುವಿನ ಆತ್ಮವೊಂದಿದೆ
ನನಗೂ ಒಂದು ಉಸಿರಿದೆ
ಆ ಉಸಿರಿಗೆ ಜೀವನ ಸಾಗಿಸುವ ಹಸಿವಿದೆ

ನಾನು ಆಟದ ವಸ್ತುವಲ್ಲ ಆಡಿಕೊಳ್ಳಲು
ತಿಂಡಿಯ ತುಂಡಲ್ಲ ತೃಷೆಯ ನೀಗಿಸಲು
ಕೊರಡು ಕಟ್ಟಿಗೆಯಲ್ಲ ಉರಿದುಹೋಗಲು
ಹೂವಿನ ಮೃದು ಎಳಸು ನಾನು
ಬೀಳಲಿನ ನೆರಳಿನಂಚಿನ ತಂಪು ನಾನು
ಹರಿಯುವ ತೀರದಲ್ಲಿನ ನೀರಿನ ಹನಿಯು ನಾನು
ಇದ ಅರಿತು ಬೆರೆತು ನೀ ನಡೆ
ಏಕೆಂದರೆ ನಾನು ಒಂದು ಹೆಣ್ಣು


2 comments:

  1. Good one again!!
    Wondering how could you write so regularly!!

    ಕೊನೆಯ ಪ್ಯಾರಾದ ಎರಡನೇ ಸಾಲು "ನಿಂತ ನೀರಲ್ಲ ಕಂಡಾಗ ಕುಡಿದು ತೃಷೆಯ ನೀಗಿಸಲು" ಎಂದಿದ್ದರೆ ಹೇಗೆ ಅನಿಸಿತು ಅಷ್ಟೇ... (Just what I felt, not to reinforce your way of expression! I am not such a frequent writer)

    ReplyDelete