Thursday, 1 May 2014

ಡೈರಿ - ಪುಟ ೨೮


                " ಇವತ್ತು ನನ್ನ ದೃಷ್ಟಿ ತಗಲಿರತ್ತೆ ಸುದೀಪ್ ಗೆ. ಅದೆಷ್ಟು ಹ್ಯಾಂಡ್ ಸಮ್ ಕಾಣ್ತಿದ್ದಾ ಗೊತ್ತಾ..?? ಯಪ್ಪಾ ದೇವ್ರೇ. ಹಾಗೆ ಎದ್ದು ಹೋಗಿ ಅಪ್ಪಿಕೊಂಡು ಬಿಡೋಣ ಅನ್ನಿಸ್ತಿತ್ತು. ಬಚ್ಚನ್ ಗಿಂತ ಮಾಣಿಕ್ಯದಲ್ಲಿ ಸಖತ್ ಕಾಣಸ್ತಾನೆ. ಸುದೀಪ್, ಯು ರಿಯಲಿ ರಾಕ್." ನಾನು ಇನ್ನೂ ಫಿಲ್ಮ್ ಗುಂಗಿನಿಂದ ಹೊರಗೆ ಬಂದಿರಲಿಲ್ಲ.
                    "ಮಾರಾಯ್ತಿ, ನಿನಗೆ ಸುದೀಪ್ ಎಂದರೆ ಅದೆಷ್ಟು ಹುಚ್ಚು ಅನ್ನೋದು ಗೊತ್ತಿರುವ ವಿಷಯವೇ. ಅವನ ಗುಣಗಾನದ ಕಾರ್ಯಕ್ರಮ ಆಮೇಲೆ ಇಟ್ಟುಕೊ. ಈಗ ಫಿಲ್ಮ್ ಹೇಗಿದೆ ಅಂತಾ ಹೇಳು" ರೂಮ್ ಮೇಟ್ ನನ್ನ ಮಾತಿನ ಝರಿಗೆ ತಡೆ ಹಾಕಿದಳು.
                      "ವೆಲ್, ಹೀರೋಯಿನ್ ಗಳು ಚೆನ್ನಾಗಿಲ್ಲ. ಅದೆಲ್ಲಿಂದ ಕರ್ಕೊಂಡು ಬಂದ್ರೊ ಏನೋ. ಬಿಟ್ಟರೆ ಸುದೀಪ್ ನಟನೆಗೆ ಫುಲ್ ಮಾರ್ಕ್ಸ್. ಉಳಿದೆಲ್ಲಾ ಪಾತ್ರಗಳಿಗೆ ಕಲಾವಿದರ ಆಯ್ಕೆ ಚೆನ್ನಾಗಿದೆ. ಅವರೆಲ್ಲರೂ ಸಹ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಥೆಯಂತೂ ಬದುಕಿಗೆ ಹತ್ತಿರವಾದದ್ದರಿಂದ ಇಷ್ಟವಾಗುತ್ತದೆ. ಚಿತ್ರಕಥೆಯೂ ಸ್ಟ್ರಾಂಗ್ ಆಗಿದೆ. ತಂದೆಯಾಗಿ ರವಿಚಂದ್ರನ್, ತಾಯಿಯಾಗಿ ರಮ್ಯಕೃಷ್ಣ ಕಾಂಬಿನೇಷನ್ ಕಥೆಗೆ ಇನ್ನಷ್ಟು ಬಲ ತಂದುಕೊಡುತ್ತದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಸೂಪರ್. ಫೈಟ್ಸ್ ಎಲ್ಲಾ ಪಕ್ಕಾ ಮಾಸ್ ಆಗಿದೆ. ಸಂಭಾಷಣೆ ಉತ್ತಮವಾಗಿದೆ. ಸಾಧು ಕಾಮೆಡಿ ಅಂತೂ ಅಲ್ಟಿಮೇಟ್. ಮೊದಲಾರ್ಧ ಸೂಪರ್ ಫಾಸ್ಟ್ ಟ್ರೈನ್ ಥರ ಹೋಗತ್ತೆ. ಸೆಕೆಂಡ್ ಹಾಫ್ ಸ್ವಲ್ಪ ನಿಧಾನವಾಗಿದೆ. ಇದು ರಿಮೇಕ್ ಫಿಲ್ಮ್ ಅಲ್ವಾ..?? ಮಿರ್ಚಿ ಚಿತ್ರದ ಕಾರ್ಬನ್ ಕಾಪಿಯಂತೇನೂ ಇಲ್ಲ. ಆದರೂ ಮೂಲದ ಕಥೆಗೆಲ್ಲೂ ಧಕ್ಕೆಯಾಗಿಲ್ಲ. ಸುದೀಪ್ ನಿರ್ದೇಶನದಲ್ಲೂ ಸೈ ಅನಿಸಿಕೊಳ್ಳುತ್ತಾರೆ. ಓವರ್ ಆಲ್, ಚಿತ್ರ ಚೆನ್ನಾಗಿದೆ. ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ. ಟೋಟಲ್ ಆಗಿ ೧೦೦ಕ್ಕೆ ೮೦ ಮಾರ್ಕ್ಸ್ ಕೊಡ್ತೀನಿ ನಾನು. ನೀನು ಸುಮ್ಮನೆ ಮಿಸ್ ಮಾಡದೇ ನಾಳೆ ಥಿಯೇಟರ್ ಗೆ ಹೋಗಿ ನೋಡು."
                       "ಮ್ಯಾಡಮ್ ಚಿತ್ತ. ತಮ್ಮ ಅಪ್ಪಣೆಯಂತೆ ಆಗಲಿ." ರೂಮ್ ಮೇಟ್ ನಾಟಕೀಯವಾಗಿ ನುಡಿದಳು.


1 comment:

  1. Ashtala mast idda film..barree hengaleyara manasanne selita atwa hudugara manavannoo kedakotto?

    ReplyDelete