Thursday, 3 April 2014

ನಿನ್ನ ನೆನಪಾಗದೇ..??


ನಿನ್ನ ನೆನಪಾಗದೆ
ಬೆಳಗಿನ ನಿದ್ದೆಯು ದೂರ ಓಡುವುದೇ..??
ಕಣ್ಣು ರೆಪ್ಪೆಯ ಅಪ್ಪುಗೆಯನ್ನು ಬಿಡುವುದೇ..??
ಕನಸುಗಳು ವಿರಾಮವನ್ನು ಬಯಸಿ
ಮನಸುಗಳನ್ನು ಹೊಕ್ಕಿ ಮೈಮುರಿಯುವಂತಾದಾಗ
ನಿನ್ನ ನೆನಪಾಗದೇ..??

ನಿನ್ನ ನೆನಪಾಗದೆ
ಅಧರಗಳಲ್ಲಿ ನಗು ಅರಳಿ ನಿಲ್ಲುವುದೇ..??
ನಯನಗಳಲ್ಲಿ ಕಾಂತಿಯು ಮಿನುಗುವುದೇ..??
ವೇಗದ ಮಿತಿಯಿಲ್ಲದೇ ಸಾಗುವ ಯೋಚನೆಗಳ ಓಟಕ್ಕೆ
ಭಾವಗಳ ಹರಿವು ತಡೆಯೊಡ್ಡುವಂತಾದಾಗ
ನಿನ್ನ ನೆನಪಾಗದೇ..??

ನಿನ್ನ ನೆನಪಾಗದೆ
ಹಕ್ಕಿಗಳ ಕಲರವ ಒಲವ ರಾಗವನ್ನು ಧ್ವನಿಸಿದರೆ...??
ಗಾಳಿಯಲ್ಲಿನ ಸೌರಭ ನಿನ್ನುಸಿರನ್ನು ಸೋಕಿಸಿದರೆ..??
ಮನದಲ್ಲಿನ ಹಸಿ ಹಸಿ ಆಸೆಗಳ ಶೀತಕ್ಕೆ
ಅವ್ಯಕ್ತ ಸುಪ್ತ ತಲ್ಲಣದ ಬಿಸಿಯ ಶಾಖವು ಜೊತೆಯಾದಾಗ
ನಿನ್ನ ನೆನಪಾಗದೇ...??

ನಿನ್ನ ನೆನಪಾಗದೆ
ಮೂಕ ಮನಸ್ಸಿನ ಮೌನದಲ್ಲೂ ನಿನ್ನ ಮಾತು ಕೇಳಿದರೆ..??
ಕಪ್ಪು ಪರದೆಯ ಮೇಲೂ ನಿನ್ನ ವರ್ಣ ಮೂಡಿದರೆ..??
ನನ್ನದೆಲ್ಲವನ್ನೂ ದೋಚಿಕೊಂಡು ಹೋಗಿ
ತಿರುಗಿ ಬಂದು ಕಳ್ಳನಂತೆ ನೀ ನಾನಾಗಿ ಕುಳಿತಿರುವಾಗ
ನಿನ್ನ ನೆನಪಾಗದೇ..??


No comments:

Post a Comment