Tuesday, 1 April 2014

ಕಿರಣ


ಎತ್ತ ನೋಡಲಿ ಸುತ್ತಲೂ ಕತ್ತಲೆ
ಆವರಿಸಿಕೊಂಡಿವೆ ಕಾರ್ಮೋಡಗಳೇ
ಪಂಜರದ ಪಕ್ಷಿಯಂತೆ ಬಂಧಿಸಿ
ಕೈದಿಯಾಗಿಹವು ಯೋಚನೆಗಳೇ

ಸ್ವಾರ್ಥತನದ ಬೆಂಕಿಯಲ್ಲಿ ಬೆಂದು
ಬತ್ತಿಹೋಗಿದೆ ಭಾವದ ನೆಲೆ
ಭರವಸೆಯ ಉಸಿರ ಹುಡುಕಾಟದಲ್ಲಿ
ಕಾಣದಾಗಿದೆ ಜೀವಂತಿಕೆಯ ನೆಲೆ

ಏಕೆ ಇನ್ನೇಕೆ ಈ ಬದುಕು..??
ಸ್ವಗತದಲ್ಲಿ ಕೇಳಿದ್ದೆಷ್ಟು ಬಾರಿ
ಆಶಯದ ಬೇರು ಸತ್ತಿಲ್ಲ ಇನ್ನು
ನಾಳೆಗಳ ಕನಸಿನೊಂದಿಗೆ ಸೇರಿ

ಅನಿರೀಕ್ಷಿತವಾದ ಅಚ್ಚರಿಗಳಿಗಾಗಿ
ಸಾಗಲೇಬೇಕು ಈ ಪಯಣ
ಇಂದು ಆಗಸದಲ್ಲಿ ಕಪ್ಪಾದರೆ ಏನಂತೆ
ಮೂಡಬಹುದಲ್ಲ ಮತ್ತೆ ಕಿರಣ


1 comment:

  1. ಪ್ರತಿ ಕಾರ್ಗತ್ತಲ ರಾತ್ರಿಯ ನಂತರವೂ ಬೆಳ್ಳಿ ಬೆಳಗು ಮೂಡುತ್ತದೆ. ಕಾರ್ಮೋಡ ಕವಿದು ಮಳೆ ಸುರಿದರೂ ಬೆಳಕು ಮೂಡಲೇ ಬೇಕು... ಅದೇ ಪ್ರಕೃತಿ ಅದೇ ಜೀವನ............

    ReplyDelete