Wednesday, 5 March 2014

ಸುಳಿ


ತೇಲುತಿಹೆ ನಾ ವಿರಾಮವಿಲ್ಲದೆ
ನನ್ನೊಳಗಿನ ಭಾವಗಳ ಸುಳಿಯಲ್ಲಿ
ಹೊರಬರಲು ಯತ್ನಿಸಿದಷ್ಟೂ
ಇನ್ನು ಆಳಕ್ಕಿಳಿಯುತಲಿ
ಸುತ್ತುತಲೇ ಇರುವ ಸ್ಥಿತಿಯು ನನ್ನದು

ಶಾಂತವಾದ ಕೊಳದಲ್ಲಿ
ಯಾವಾಗ ಎದ್ದವೋ ಈ ಸುಳಿಗಳು
ಯಾರಾದರೂ ಕಲ್ಲೆಸೆದರೋ
ನಾನೇ ಎಸೆದುಕೊಂಡಿಹೆನೋ
ಅಬ್ಬರಿಸುವ ಗೊಂದಲಗಳು

ತಿಳಿಯೆಲ್ಲ ಕದಡಿಹೋಗಿಹುದು
ತಳದವರೆಗೆ ಕತ್ತು ಹಾಯಿಸಿದರೂ
ಕಣ್ಣಿಗೆ ಕಸಗಳೇ ಎಲ್ಲ
ಎಷ್ಟು ಆಲೋಚಿಸಿದರೇನು
ಸ್ವಚ್ಛವಾಗಿಸುವ ಪರಿ ತಿಳಿಯದಲ್ಲ

ಬದುಕೆಂದರೆ ಹೀಗೆ ತಾನೆ
ಇಂದು ಏರಿದರೆ ನಾಳೆ ಇಳಿತ
ಕಲ್ಲು ಬಂಡೆಗೂ ತಪ್ಪುವುದಿಲ್ಲ
ಅಲೆಗಳ ಹೊಡೆತ
ಮೃದು ಮನಸ್ಸು ಹೊರತಲ್ಲ


3 comments:

  1. Wov....wonderful...it surely deserves an award :)

    ReplyDelete
  2. Wov....wonderful...it surely deserves an award :)

    ReplyDelete