Thursday, 20 March 2014

ಅವ್ಯಕ್ತ


ಹುದುಗಿತ್ತೇ ಬೆಚ್ಚವಾಗಿ..??
ಎದೆಯ ಮೂಲೆಯಲ್ಲಿ ತನಗೇ ತಿಳಿಯದಂತೆ
ಅಂದು ಹೆಸರಿಲ್ಲದೆ ಹುಟ್ಟಿತು
ಇಂದು ನಾಮಕರಣದ ಸಂಭ್ರಮ
ಏನೆಂದು ಕರೆಯಲಿ ನೀನೇ ಹೇಳು

ಗರ್ಭದಲ್ಲಿನ ಕುಡಿಯಂತೆ
ಸಿಹಿ ಅನುಭವಗಳ ನೀಡುತ್ತಾ
ಅಡಗಿ ಕುಳಿತಿದ್ದರೂ ಬೂದಿಯಲ್ಲಿನ ಕೆಂಡದಂತೆ
ಸುಡಲಿಲ್ಲ ತಾನು ಎಂದಿಗೂ
ಕೊನೆಗೆ ಬೆಳಗಿತಲ್ಲ ಮೈಮನಗಳನ್ನು

ಆದಿ ಅಂತ್ಯಗಳೆಂಬ ಬೇಲಿಯ ಪರಿಧಿಯಿಲ್ಲ
ತೆರೆದಿರದ ಹೃದಯದ ಆಗಸದಲ್ಲೂ
ಸ್ವಚ್ಛಂಧವಾಗಿ ಹಾರಾಡಿತೇ..??
ಬಂಧನಗಳ ಹಂಗಿಲ್ಲದೆ ಬೆಳೆಯುವ
ವ್ಯಕ್ತವಾಗದ ಭಾವವು ಎಂದಿಗೂ ಜೀವಂತ


No comments:

Post a Comment