Tuesday, 11 March 2014

ಗುಂಗು



ಅದ್ಯಾವ ಮೋಡಿ ನೀ ಮಾಡಿಹೆ
ನಾ ಕಳೆದು ಹೋಗುವಂತೆ
ನಿನ್ನ ಮಾಯೆಯ ರಾಜಧಾನಿಯಲ್ಲಿ
ಬಿಡದೇ ನಾ ಅಲೆದಾಡುವಂತೆ

ತಲೆಯ ತುಂಬೆಲ್ಲ ನಿನ್ನದೇ ನುಡಿಯು
ಹಸಿ ಹೆಜ್ಜೆಯು ಮನದಂಗಳದಲ್ಲಿ
ಮತ್ತೆ ಮತ್ತೆ ಮೂಡಿ ಮರೆಯಾಗುವುದಲ್ಲ
ನಿನ್ನ ಬಿಂಬವು ಈ ಕಣ್ಣ ಪರದೆಯಲ್ಲಿ

ಖುಷಿಯ ಸುಮವು ತನ್ನ ಸೌರಭವ ಬೀರಿದೆ
ರೋಮರೋಮಗಳಲ್ಲಿ ಉಲ್ಲಾಸದ ರಂಗು
ಹೇಳಿಯೇ ಬಿಡಲೆ ಗೆಳೆಯ ಕೊನೆಯಲ್ಲಿ
ನಗುವಿನ ಕಾರಣ ನಿನ್ನ ಗುಂಗು

1 comment: