Wednesday, 5 February 2014

ನಿರಾಳ



ನೀರಿನಲ್ಲಿ ಅದ್ದಿ ತೆಗೆದು
ಒಣಹಾಕಿದ ಹತ್ತಿಯಂತಾಗಿದೆ ಮನಸು
ಹಗುರವಾದ ಮೈಮನಗಳಲ್ಲಿ
ಮೂಡಿದೆ ಹೊಸ ಯೌವ್ವನದ ವಯಸು
ಕರಿಮೋಡವನು ದೂರ ಸರಿಸಿ
ಸೂರ್ಯನ ಕಿರಣಗಳಾಡುವ ಸೊಗಸು

ಭಾವ ಬಂಧನಗಳ ಪಂಜರದಿಂದ ಮುಕ್ತಗೊಂಡು
ಹಕ್ಕಿಯಿಂದು ಹಾರಿದೆ ಸ್ವಚ್ಛಂಧವಾಗಿ
ಗೊಂದಲದ ಸುಳಿಯಲ್ಲಿ ಸುತ್ತುತ್ತಿದ್ದ ಮೀನು
ಈಜಾಡಿದೆ ತಿಳಿನೀರಿನಲ್ಲಿ ಹಾಯಾಗಿ
ಹಳೇ ಮಣ್ಣು ಪೂರ್ತಿಯಾಗಿ ಕೊಚ್ಚಿಹೋಗಿ
ಹೊಸ ಮಣ್ಣಿನ ಸುವಾಸನೆ ಹರಡಿದೆ ಗಂಧವಾಗಿ

ಗುರಿತಿಳಿಯದೇ ಹೆಜ್ಜೆ ಹಾಕುತ್ತಿದ್ದರೆ
ಆ ಪಯಣದ ಹಾದಿಯೇ ಕರಾಳ
ನಿನ್ನ ನೀ ಅರಿತುಕೊಳ್ಳಲು
ನೀನೊಮ್ಮೆ ಹೋಗಬೇಕು ಆಳ
ಅರಿವು ಮೂಡಿ ನಿಖರತೆಯ ಬೆಳಕು ಬೆಳಗಿದಾಗ
ಪ್ರತಿ ಉಸಿರುಸಿರಿನಲ್ಲೂ ನಿರಾಳ


1 comment: