Monday, 3 February 2014

ಹನಿಗವನ-೩

೧.
ಮನಸ್ಸಿನಲ್ಲಿ ಶೂನ್ಯತೆ ತುಂಬಿದಾಗ
ಶಾಂತಿ ದೊರೆಯುವುದೋ
ಶಾಂತಿಯ ಅರಸುತ ಹೊರಟಾಗ
ಶೂನ್ಯತೆ ಆವರಿಸುವುದೋ
ಯಾವುದು ಶಾಂತಿ? ಯಾವುದು ಶೂನ್ಯತೆ?

೨.
ಕನಸ ಬೆನ್ನತ್ತಿ ಹೊರಟಾಗ
ಮನಸು ನಲಿದಿತ್ತು
ಕತ್ತಲೆಯಲ್ಲೆಲ್ಲೋ ಹಾದಿ ತಪ್ಪಿತ್ತು
ಅದು ತಿಳಿದಾಗ
ಕನಸೂ ಕಾಣೆಯಾಗಿತ್ತು
ಮನಸು ಮಾಯವಾಗಿತ್ತು

೩.
ಸುತ್ತಲೂ ನಾದಸ್ವರ
ಅದೇ ಭಾವ ಹೊಸ ಪದ
ಅದೇ ರಾಗ ಹೊಸ ತಾಳ
ನನ್ನೊಳಗೆ ಬದಲಾವಣೆಯಿಲ್ಲ
ಹಳೇಯದೇ ರಾಗ ತಾಳ ಎಲ್ಲ


1 comment: