Friday, 27 September 2013

ಕನಸು ಕಾಣೆಯಾಗಿದೆ

        
ಎತ್ತಲೋ ಮಾಯವಾಗಿದೆ
ಒಮ್ಮೆಲೇ ಕಳ್ಳನಂತೆ
ನಿನ್ನೆ ಮೊನ್ನೆಯಷ್ಟೇ ದೊರಕಿತ್ತು ನನಗೆ
ನನ್ನದೆನ್ನುವ ಏಕಮಾತ್ರ ಸಿರಿಯು
ಈಗೆಲ್ಲಿ ಹೋಯಿತೋ ನನ್ನ ಬಿಟ್ಟು
ಸೋತುಹೋದೆ ನಾ ಹುಡುಕಾಡಿ
ಕಳೆದುಹೋಗಿದೆ ನನ್ನ ಕನಸು

ನಾನೇ ಎಲ್ಲಾದರೂ ಇಟ್ಟು ಮರೆತೆನೆ?
ಯಾರಿಗಾದರೂ ಕೊಟ್ಟು ಬಿಟ್ಟೆನೆ?
ಇಲ್ಲ, ನಾ ಯಾರಿಗೂ ಕೊಟ್ಟಿಲ್ಲ
ಕದ್ದುಬಿಟ್ಟರೆ ನನಗೇ ತಿಳಿಯದಂತೆ?
ಯಾರೇಕೆ ಕದಿಯುತ್ತಾರೆ ನನ್ನ ಕನಸನ್ನು?
ಹಾಗಾದರೆ ಮತ್ತೇನಾಯಿತೋ?

ಎಷ್ಟು ಸುಂದರವಾಗಿತ್ತು ನನ್ನ ಕನಸು
ಪೋಣಿಸಿದ ಮುತ್ತಿನ ಹಾರದಂತೆ
ಪುಟ್ಟ ಮಗುವಿನ ಆಟಿಕೆಯಂತೆ
ಚಿಕ್ಕದಾಗಿ ಚೊಕ್ಕವಾಗಿ ಚಂದವಿತ್ತು
ಅದು ಎಂದಿಗೂ ನನ್ನದಾಗಿತ್ತು
ನನ್ನ ಮನಸಿನ ಕೂಸಾಗಿತ್ತು
ಎಲ್ಲಿ ಕಾಣೆಯಾಯಿತೋ?

ಸಾಕಿದ್ದೆ ಅದನೆಷ್ಟು ಮುಚ್ಚಟೆಯಿಂದ
ನನ್ನ ಆಸೆಗಳನ್ನೆಲ್ಲಾ ಧಾರೆಯೆರೆದು
ಒಡಲೊಳಗೆ ಬಚ್ಚಿಟ್ಟಿದ್ದೆಗುಬ್ಬಚ್ಚಿಯಂತೆ
ಈಗ ತಾನೇ ರೆಕ್ಕೆ ಬಲಿತು ಬಂದಿತ್ತು
ಹಾರುವುದನ್ನು ಕಲಿಯುತಲಿತ್ತು
ನನಗೇ ಹೇಳದೇ ಹಾರಿಹೋಯಿತೇ?

ತುದಿಮೊದಲಿಲ್ಲದ ಈ ಪ್ರಶ್ನೆಗಳಿಗೆ
ದೊರಕದು ಉತ್ತರ ಕೊನೆಯವರೆಗೆ
ನನ್ನ ಕನಸು ನನ್ನನ್ನು ಏಕಾಂಗಿಯಾಗಿಸಿ
ದೂರ ಹೊರಟು ಹೋಯಿತಲ್ಲ
ಉಸಿರಾಡಲಿ ಇನ್ನು ನಾ ಹೇಗೆ?
ಮರಳಿ ಸಿಗಬಹುದೇನು ನನಗೆ?
ನನ್ನತನವನ್ನೇ ಹೊತ್ತೊಯ್ದಿಹ ಕನಸು?

Thursday, 12 September 2013

PROMISE ME…


Promise me

That you may not keep me happy

But you’ll never let tears roll down on my face

I do not want you to wipe away them

Instead, I would like to find you not a cause for my sadness

 

Promise me

That you may not be with me all the time

But you will never make me feel lonely

You may be thousands miles far away from me

But the fragrance of your care will assure me

That I am alone anymore

 

Promise me

That you may be busy with your work

But you will never make reasons to escape

For  not having time to spend with me

A bitter truth would comfort me much better

Than a sweet lie

 

Promise me

That you’ll never promise me anything

You will never hold my trust

And even if you promise about something

Take care that you will keep your words

Because, your one promise

May break my heart into thousands of pieces

Wednesday, 4 September 2013

ಮರೀಚಿಕೆ

             
ನನ್ನ ಬಾಳೊಂದು ಮರೀಚಿಕೆ
ಸಾಗುತಿಹೆ ಬಿಸಿಲುಗುದುರೆಯ ಬೆನ್ನೇರಿ ನಾನು
ಗಮ್ಯರಹಿತ ಪಯಣ ನನ್ನದು ಪ್ರತಿಕ್ಷಣವೂ
ತುದಿಮೊದಲಿಲ್ಲದ ಅನಿರೀಕ್ಷಿತ ತಿರುವು

ನನ್ನರಸಿ ಬರುವ ವೈಭವದ ಬದುಕನ್ನು
ಅರಿಯಲಾರದಷ್ಟು ಕುರುಡಾಗಿದೆ ಮನಸು
ಓಡುತಿರುವೆ ನಾ ಹುಚ್ಚು ಕನಸುಗಳ ಬೆಂಬತ್ತಿ
ನನಸಾಗಲಾರವೆಂದು ತಿಳಿದೂ ಕೂಡ

ಸಡಿಲಗೊಂಡಿದೆ ಬಂಧನಗಳ ಕೊಂಡಿ ಕೊಂಡಿಗಳು
ಪೊಳ್ಳಾಗಿಹವು ಮಾನವೀಯ ಮೌಲ್ಯಗಳು
ಶಿಥಿಲಗೊಂಡ ಮೇಲೆ ಜೀವಸೆಲೆಯ ಬೇರು
ಮೂಡಲೆಂತು ಒಡಲಲ್ಲಿ ಹೊಸ ಚಿಗುರು?

ಯಾರಿಗಾಗಿ ಉಸಿರಾಡುತಿಹುದೋ ಈ ಜೀವ?
ಯಾಕಾಗಿ ಮಿಡಿಯುತಿಹುದೋ ಈ ಭಾವ?
ಉತ್ತರವಿಲ್ಲದ ಪ್ರಶ್ನೆಗಳೇ ನನ್ನ ನಾಳೆಯು
ಅರ್ಥರಹಿತ ಗೊಂದಲಗಳೇ ಪ್ರತಿ ಹಾಡಿನ ರಾಗವು

ಮೂಡುವುದು ನನ್ನ ಬದುಕಲ್ಲೂ ಕಿರಣಗಳು
ಮರುಭೂಮಿಯಲ್ಲಿನ ಓಯಸಿಸ್ ನಂತೆ
ಆದರೆ ಮಾಯವಾಗುವವು ಕ್ಷಣಮಾತ್ರದಲ್ಲಿ
ಮರೀಚಿಕೆಯ ಹೊದಿಕೆಯನ್ನು ಹೊತ್ತು